ಅಟ್ಲಾಸ್ ಪರ್ವತಗಳು
	
ಆಫ್ರಿಕದ ವಾಯುವ್ಯತೀರಕ್ಕೆ ಸಮಾಂತರವಾಗಿ 1,500 ಕಿ.ಮೀ. ವಿಸ್ತಾರವಾಗಿ ಮೊರಾಕೊ ಆಲ್ಜೀರಿಯ ಟ್ಯುನಿಸಿಯಾಗಳ ಮುಖಾಂತರ ಹಾದುಹೋಗುತ್ತವೆ. ಇದರ ಉತ್ತರಕ್ಕೆ ಮೆಡಿಟರೇನಿಯನ್ ಸಮುದ್ರವೂ ದಕ್ಷಿಣಕ್ಕೆ ಸಹರಾ ಮರುಭೂಮಿಯೂ ಇವೆ. ಮುಖ್ಯಶ್ರೇಣಿ ಮಧ್ಯಸ್ಥಾನದಲ್ಲಿದೆ. ಸರಾಸರಿ ಎತ್ತರ 11,000' ಗಿಂತಲೂ ಹೆಚ್ಚು. ವರ್ಷದ ಹೆಚ್ಚುಕಾಲ ಇಲ್ಲಿಯ ಶಿಖರಗಳು ಹಿಮದಿಂದ ಕೂಡಿರುತ್ತವೆ. ಉತ್ತರದ ಹಾಗೂ ಶಿಖರಗಳ ಇಳಿಜಾರಿನ ಭಾಗಗಳು ದಟ್ಟವಾದ ಕಾಡುಗಳಿಂದ ಕೂಡಿವೆ. 
	
ಈ ಪರ್ವತಗಳನ್ನು ಎರಡು ಮುಖ್ಯ ಶ್ರೇಣಿಗಳನ್ನಾಗಿ ವಿಂಗಡಿಸಬಹುದು : 1. ಸೆಂಟಾದಿಂದ ಟಾನ್ ಭೂಶಿರದವರೆಗೆ ಹರಡಿರುವ ಸಾಗರಿಕ ಶ್ರೇಣಿ 2. ಘಿರ್ ಭೂಶಿರದಿಂದ ದಕ್ಷಿಣ ತೀರಕ್ಕೆ ಹರಡಿರುವ ಒಳ ಹಾಗೂ ಹೆಚ್ಚು ಎತ್ತರದ ಶ್ರೇಣಿ. ಇಲ್ಲಿಯ ಗಣಿಗಳಲ್ಲಿ ಫಾಸ್ಫೇಟುಗಳು ಹೇರಳವಾಗಿ ಸಿಗುತ್ತವೆ.						
(ಎಂ.ಎಸ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ